top of page
Writer's pictureKannada Tech Times

ಪಿಕ್ಸೆಲ್ ೮ ಸರಣಿಯ ಫೋನ್‌ಗಳ ಬಿಡುಗಡೆಯ ದಿನಾಂಕ ಪ್ರಕಟಿಸಿದ ಗೂಗಲ್ : Google Pixel 8 & 8 Pro Details

Google Pixel 8 & 8 Pro Details: ಗೂಗಲ್‌ನ ಪಿಕ್ಸೆಲ್ ಸರಣಿ ಸ್ಮಾರ್ಟ್ಫೋನ್ ಗಳು ಕ್ಯಾಮೆರಾ ಮತ್ತು ತನ್ನ ಪರ್ಫಾಮೆನ್ಸ್ ಮೂಲಕ ಮಾರುಕಟ್ಟೆಯಲ್ಲಿ ಚಿರಪರಿಚಿತವಾಗತ್ತು. ಇಂತಹದೇ ಸಾಲಿಗೆ ಸೇರುವ ಗೂಗಲ್ ಪಿಕ್ಸೆಲ್ ತನ್ನ ಹೊಸ ಸರಣಿ ಪಿಕ್ಸೆಲ್ ೮ ನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಹುತೇಕ ಪಿಕ್ಸೆಲ್ 7 ನ್ನೇ ಹೋಲುವ ಪಿಕ್ಸೆಲ್ ೮ ಸರಣಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಡಿಸ್‌ಪ್ಲೇ

ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್ ಫೋನ್ 6.17 ಇಂಚಿನ ಅಮೋಲೆಡ್ HDR10+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ 1400 Nits ಬ್ರೈಟ್ ನೆಸ್ ನ್ನು ಒಳಗೊಂಡಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ Victus 2ನ ರಕ್ಷಣೆಯೂ ಕೂಡ ಇದೆ.


ಕ್ಯಾಮೆರಾ

ಪಿಕ್ಸೆಲ್ 8 ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 10.8 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Mobile Body
Photo Credit: Google

ಪ್ರೊಸೆಸರ್

ಈ ಸ್ಮಾರ್ಟ್ಫೋನ್ ಅಕ್ಟೋಬರ್ ಪ್ರೊಸೆಸರ್‌ನ್ನು ಹೊಂದಿದೆ. ಇದಲ್ಲದೇ Adreno Mali-G710 MC10 GPU ಇದ್ದು, ಆಂಡ್ರಾಯ್ಡ್ 14ರ ಗೂಗಲ್ ಟೆನ್ಸರ್ G3 ಚಿಪ್‌ಸೆಟ್ ನೀಡಲಾಗಿದೆ. ಮುಂದಿನ ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ಸ್ಗಳ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.


ಬ್ಯಾಟರಿ ಮತ್ತು ಕನೆಕ್ಟಿವಿಟಿ

ಪಿಕ್ಸೆಲ್ ೮ ಸ್ಮಾರ್ಟ್ ಫೋನ್ 4485mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 24W ವಯರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 12W ವಯರ್‌ಲೆಸ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5G, ಬ್ಲೂಟೂತ್ 5.3 ನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ ಗೆ ಯಾವುದೇ ಹೆಡ್‌ಫೋನ್ ಜಾಕ್ ಇಲ್ಲ.


ಲಭ್ಯತೆ

ಈ ಸ್ಮಾರ್ಟ್ಫೋನ್ ಯುಎಫ್‌ಎಸ್ 4..0ನ 12GB + 128GB ಸ್ಟೋರೇಜ್ ಮತ್ತು 12GB + 256 ಸ್ಟೋರೇಜ್ ರೂಪಾಂತರವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಅಕ್ಟೋಬರ್ 4 ರಂದು ಲಾಂಚ್ ಆಗಲಿದ್ದು, ಕಳೆದೆರಡು ವಾರಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.


ಅಕ್ಟೋಬರ್ 4 ರಂದು ಪಿಕ್ಸೆಲ್ 8 ಸರಣಿ ಬಿಡುಗಡೆ ..!!

ನ್ಯೂಯಾರ್ಕ್ ನಗರದಲ್ಲಿ ಗೂಗಲ್ ಪಿಕ್ಸ್ಲ್ ೮ರ ಬಿಡುಗಡೆಯ ಈವೆಂಟ್ ನಡೆಯಲಿದ್ದು, ಈ ಈವೆಂಟ್ ಅನ್ನು YOUTUBE ನಲ್ಲಿ ಲೈವ್-ಸ್ಟ್ರೀಮ್ ಮೂಲಕ ಗ್ರಾಹಕರಿಗೆ ವೀಕ್ಷಿಸಲು ಅವಕಾ ಕಲ್ಪಿಸಿಕೊಡಲಾಗಿದ್ದು, ಭಾರತದಲ್ಲಿ ಸಂಜೆ 7.30 ಕ್ಕೆ ಈ ನೇರಪ್ರಸಾರ ವೀಕ್ಷಿಸಬಹುದು. ಅಲ್ಲದೇ ಈ ಸಮಾರಂಭದಲ್ಲಿ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಈ ಬಾರಿ ಬಿಡುಗಡೆಯಾಗಲಿವೆ ಎನ್ನುವ ಮಾಹಿತಿಯೂ ಇದೆ.


0 comments

Comentarios


bottom of page