ಹಾನರ್ ಮೊಬೈಲ್ ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರಚಲಿತದಲ್ಲಿತ್ತಾದರೂ ಹಲವು ಕಾರಣಗಳಿಂದ ತನ್ನ ನಿಲುವನ್ನು ಉಳಿಸಿಕೊಂಡಿರಲಿಲ್ಲ. ಆದರೆ ಮತ್ತೆ ಭಾರತೀಯ ಮಾರುಕಟ್ಟೆಗೆ HONOR 90 5G ಸ್ಮಾರ್ಟ್ ಫೋನ್ ಮೂಲಕ ಅಧಿಕೃತವಾಗಿ ರೀ ಎಂಟ್ರಿ ಕೊಟ್ಟಿದೆ. ಈ ಸ್ಮಾರ್ಟ್ಫೋನ್ ನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಡಿಸ್‌ಪ್ಲೇ
ಹಾನರ್ 90 5ಜಿ ಸ್ಮಾರ್ಟ್ ಫೋನ್ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2664*1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೇ ಡಿಸ್‌ಪ್ಲೇ 1,600 ನಿಟ್ಸ್ ಬ್ರೈಟ್‌ನೆಸ್ ಜೊತೆಗೆ ಪಂಚ್-ಹೋಲ್ ವಿನ್ಯಾಸವನ್ನು ಹೊಂದಿದೆ.
ಕ್ಯಾಮೆರಾ
ಹಾನರ್ 90 5ಜಿ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಎಂಪಿ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 50 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಪ್ರೊಸೆಸರ್
ಈ ಸ್ಮಾರ್ಟ್ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 1 SoC ಪ್ರೊಸೆಸರ್‌ನ್ನು ಹೊಂದಿದೆ. ಇದಲ್ಲದೇ Adreno 644 GPU ಇದ್ದು, ಆಂಡ್ರಾಯ್ಡ್ ೧೩ರ ಮ್ಯಾಜಿಕ್ ಓಎಸ್ 7.1 ನ್ನು ನೀಡಲಾಗಿದೆ. ಮುಂದಿನ 3 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ಸ್ಗಳನ್ನು ಹಾನರ್ ನೀಡಲಿದೆ.
ಬ್ಯಾಟರಿ ಮತ್ತು ಕನೆಕ್ಟಿವಿಟಿ
ಹಾನರ್ 90 5ಜಿ ಸ್ಮಾರ್ಟ್ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5ಜಿ, ಬ್ಲೂಟೂತ್ 5.2 ನ್ನು ಸಪೋರ್ಟ್ ಮಾಡುತ್ತದೆ.
ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್ ಫೋನ್ 6GB RAM + 265GB ಸ್ಟೋರೇಜ್‌ಗೆ 37,999 ಮತ್ತು 12GB+ 512GB ಸ್ಟೋರೇಜ್ ರೂಪಾಂತರಕ್ಕೆ 39,999 ಬೆಲೆಯನ್ನು ನಿಗದಿ ಮಾಡಲಾಗಿದೆ. ಜೊತೆಗೆ ಈ ಫೋನ್ ಡೈಮಂಡ್ ಸಿಲ್ವರ್, ಎಮರಾಲ್ಡ್ ಗ್ರೀನ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಸೆಪ್ಟೆಂಬರ್ ೧೮ ರಿಂದ ಅಮೆಜಾನ್ ಮತ್ತು ಹಾನರ್‌ನ ಅಧಿಕೃತ ವೆಬ್‌ಸೈಟ್ ಗ್ರಾಹಕರಿಗೆ ದೊರೆಯಲಿದೆ.
ಲಾಂಚ್ ಆಫರ್
ಹಾನರ್ 90 5ಜಿ ಪರಿಚಯಾತ್ಮಕ ಬೆಲೆಯಲ್ಲಿ ಸದ್ಯ 6GB RAM + 265GB ಸ್ಟೋರೇಜ್ ಗೆ 27,999 ಮತ್ತು 12GB+ 512GB ಸ್ಟೋರೇಜ್ ಗೆ 29,999 ಬೆಲೆಯಲ್ಲಿ ಸೀಮಿತ ಅವಧಿಯ ತನಕ ಲಭ್ಯವಾಗಲಿವೆ.
Bình luận