ಭಾರತದಲ್ಲಿ ನೋಕಿಯಾ ಕಳೆದ ವಾರ ಬಜೆಟ್ ಫ್ರೆಂಡ್ಲಿ ಸ್ಟೈಲಿಶ್ ಸ್ಮಾರ್ಟ್ ಫೋನ್ ನ್ನು ಅನಾವರಣ ಮಾಡಿತ್ತು. ಅದೇ Nokia G42 5G. ಇದು ತನ್ನ ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿಯನ್ನು ಕಡಿಮೆ ಬಜೆಟ್ ಬೆಲೆಯಲ್ಲಿ ಲಾಂಚ್ ಮಾಡಲಾಗಿದ್ದು, ಇಂದಿನಿಂದ (ಸೆ. 15) ಅಮೇಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದರ ಫೀಚರ್ಸ್ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಡಿಸ್‌ಪ್ಲೇ
ನೋಕಿಯಾ ಜಿ42 5ಜಿ 720*1612 ಪಿಕ್ಸೆಲ್ ರೆಸಲ್ಯೂಶನ್ ನ 6.56 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಫೋನ್ 90Hz ಸ್ಕ್ರೀನ್ ರಿಫ್ರೆಶಿಂಗ್ ರೇಟ್ ಜೊತೆಗೆ 560 ನಿಟ್ಸ್ ಬ್ರೈಟ್ ನೆಸ್ ಹೊಂದಿದ್ದು, ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿದೆ.
ಕ್ಯಾಮೆರಾ
ನೋಕಿಯಾ ಜಿ42 5ಜಿ ಸ್ಮಾರ್ಟ್ ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಎಂಪಿ ಪ್ರಾಥಮಿಕ ಕ್ಯಾಮೆರಾ, 2 ಎಂಪಿ ಡೆಪ್ತ್ ಕ್ಯಾಮೆರಾ, 2 ಎಂಪಿ ಮ್ಯಾಕ್ರೋ ಲೆನ್ಸ್ ಒಳಗೊಂಡಿದೆ. ಮುಂಭಾಗದಲ್ಲಿ 8 ಎಂಪಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಪ್ರೊಸೆಸರ್
ನೋಕಿಯಾ ಜಿ42 5ಜಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಅದರೊಂದಿಗೆ ಆಡ್ರಿನೋ 619 ಜಿಪಿಯು ಅನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಇನ್‌ಬಾಕ್ಸ್ ನಲ್ಲಿ ಆಂಡ್ರಾಯ್ಡ್ 13 ನೊಂದಿಗೆ ದೊರೆಯಲಿದ್ದು, ನೋಕಿಯಾ ಆಂಡ್ರಾಯ್ಡ್ 14 ಮತ್ತು ಆಂಡ್ರಾಯ್ಡ್ 15 ಎರಡು ಆವೃತ್ತಿಯ ಅಪ್‌ಡೇಟ್ ನೀಡುವುದಾಗಿ ತಿಳಿಸಿದೆ.
ಬ್ಯಾಟರಿ ಮತ್ತು ಇತರೆ
ನೋಕಿಯಾ ಜಿ42 5ಜಿ ಫೋನ್ 5000 mAh ಬ್ಯಾಟರಿಯನ್ನು ಹೊಂದಿದ್ದು, 20W ವೇಗದ ಚಾರ್ಜಿಂಗ್ ಸಾಮರ್ಥ್ಯವಿದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದ್ದು, ಡ್ಯುಯಲ್-ಸಿಮ್, 5ಜಿ, ಬ್ಲೂಟೂತ್ 5.1, 3.5mm ಆಡಿಯೋ ಜ್ಯಾಕ್‌ನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ನೋಕಿಯಾ ಜಿ42 5ಜಿ ಸ್ಮಾರ್ಟ್ ಫೋನ್ ಒಂದೇ ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. 6 ಜಿಬಿ ರ‍್ಯಾಮ್ ಜೊತೆಗೆ 128 ಜಿಬಿ ಇಂಟರ್ನಲ್ ಮೆಮೊರಿಯ ಫೋನ್ ಗೆ 12,999 ರೂ ನಿಗದಿಮಾಡಲಾಗಿದೆ. ಈ ಸ್ಮಾರ್ಟ್ ಫೋನ್ ಲವೆಂಡರ್ ಮತ್ತು ಮೀಟಿಯಾರ್ ಗ್ರೇ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಸದ್ಯಕ್ಕೆ ಈ ಫೋನ್ ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.
Comments