C Drive Clean: ಬಹುತೇಕ ಲ್ಯಾಪ್‌ಟಾಪ್ ಮತ್ತು CPU ಸಿ ಡ್ರೈವ್ ಪ್ರಾಬ್ಲಮ್‌ನಿಂದ ಸಿಸ್ಟಮ್ ಸ್ಲೋ ಆಗುತ್ತಲೇ ಇರುತ್ತದೆ. ನಾವು ತಿಳಿಸುವ ಈ ಸ್ಟೆಪ್‌ಗಳನ್ನು ಅನುಸರಿಸಿ, ನಿಮ್ಮ ಸಿಸ್ಟಮ್‌ನ್ನು ಇನ್ನಷ್ಟು ವೇಗವಾಗಿಟ್ಟುಕೊಳ್ಳಿ.
ಸ್ಟೆಪ್ ೦1
ಮೊದಲು ನಿಮ್ಮ ಸಿಸ್ಟಮ್‌ನಲ್ಲಿ Windows key ಮತ್ತು R ನ್ನು ಒತ್ತಿ. ಅದಾದಮೇಲೆ ಅಲ್ಲಿ prefetch ಟೈಪ್ ಮಾಡಿ Ok ಮಾಡಿ, ಬಳಿಕ ಎಲ್ಲಾ ಫೈಲ್ಸ್ ಗಳನ್ನು ಸೆಲೆಕ್ಟ್ ಮಾಡಿ ಎಲ್ಲವನ್ನು ಡಿಲೀಟ್ ಮಾಡಿ.
ಸ್ಟೆಪ್ ೦2
ಸಿಸ್ಟಮ್‌ನಲ್ಲಿ Windows key ಮತ್ತು R ನ್ನು ಒತ್ತಿ. ಅದಾದಮೇಲೆ ಅಲ್ಲಿ temp ಟೈಪ್ ಮಾಡಿ OK ಮಾಡಿ, ಬಳಿಕ ಎಲ್ಲಾ ಫೈಲ್ಸ್ ಗಳನ್ನು ಸೆಲೆಕ್ಟ್ ಮಾಡಿ ಎಲ್ಲವನ್ನು ಡಿಲೀಟ್ ಮಾಡಿ.
ಸ್ಟೆಪ್ ೦3
ಸಿಸ್ಟಮ್‌ನಲ್ಲಿ Windows key ಮತ್ತು R ನ್ನು ಒತ್ತಿ. ಅದಾದಮೇಲೆ ಅಲ್ಲಿ %temp% ಟೈಪ್ ಮಾಡಿ OK ಮಾಡಿ , ಬಳಿಕ ಎಲ್ಲಾ ಫೈಲ್ಸ್ ಗಳನ್ನು ಸೆಲೆಕ್ಟ್ ಮಾಡಿ ಎಲ್ಲವನ್ನು ಡಿಲೀಟ್ ಮಾಡಿ.
ಸ್ಟೆಪ್ ೦4
ಸಿಸ್ಟಮ್‌ನಲ್ಲಿ My Computer or This PC ಗೆ ತೆರಳಿ, ಅಲ್ಲಿ C Drive ಮೇಲೆ Right Click ಮಾಡಿ ನಂತರ Properties ಗೆ ತೆರಳಿ, ಅದಾದಮೇಲೆ ಅಲ್ಲಿ Disk Clean-up Click ಮಾಡಿ. ನಂತರ ಎಲ್ಲವನ್ನೂ ಸೆಲೆಕ್ಟ್ ಮಾಡಿ OK ಕೊಡಿ, ಬಳಿಕ Delete Files ಬಟನ್ ಮೇಲೆ click ಮಾಡಿದರೆ ಆಯ್ತು.
ಸ್ಟೆಪ್ ೦5
ಸಿಸ್ಟಮ್‌ನಲ್ಲಿ ವಿಂಡೋಸ್ ಕಿ ಮತ್ತು ಆರ್ ನ್ನು ಒತ್ತಿ. ಅದಾದಮೇಲೆ CMD ಟೈಪ್ ಮಾಡಿ OK ಮಾಡಿ, ಬಳಿಕ ipconfig/flushdns ಎಂದು ಟೈಪ್ ಮಾಡಿ Enter ಕೊಟ್ಟರೆ Caches ಕ್ಲಿಯರ್ ಆಗುತ್ತದೆ.
Comments