ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್ನಲ್ಲಿ ಟಿಮ್ ಕುಕ್ ಹೊಸ I Phone 15 Series ಪರಿಚಯಿಸಿದ್ದಾರೆ. ಈ ಪೈಕಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೋ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿವೆ.
ಡಿಸ್‌ಪ್ಲೇ
ಐಫೋನ್ 15 ಮತ್ತು ಐಫೋನ್ 15 ಪ್ರೋ 6.1-ಇಂಚಿನ ಡಿಸ್‌ಪ್ಲೇಯ ಜೊತೆ 60 Hz ಸ್ಕ್ರೀನ್ ರಿಫ್ರೆಶಿಂಗ್ ರೇಟ್‌ನ್ನು ಹೊಂದಿದ್ದು, ಐಫೋನ್ ೧೫ ಪ್ಲಸ್ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ 6.7-ಇಂಚಿನ ಡಿಸ್‌ಪ್ಲೇಯ ಜೊತೆ 120 Hzನ ಸ್ಕ್ರೀನ್ ನ್ ರಿಫ್ರೆಶಿಂಗ್ ರೇಟ್‌ನ್ನು ಹೊಂದಿದೆ.
ಕ್ಯಾಮೆರಾ
ಹೊಸ ಐಫೋನ್ 15 ಮತ್ತು ಐಫೋನ್ 15 ಪ್ಲಸ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿವೆ. ಐಫೋನ್ 15 ಪ್ಲಸ್ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಅನ್ನು ಹೊಸ ಪೆರಿಸ್ಕೋಪ್ ಲೆನ್ಸ್ನೊಂದಿಗೆ ಪರಿಚಯಸಿದ್ದಾರೆ. ಇದರಲ್ಲಿ 48 ಎಂಪಿ ಪ್ರಾಥಮಿಕ ಸೆನ್ಸರ್, 12 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಎಂಪಿ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 12 ಎಂಪಿ ಸೆಲ್ಫಿ ಕ್ಯಾಮೆರಾ ಸೆಟಪ್‌ನ್ನು ಹೊಂದಿದೆ.
ಯುಎಸ್‌ಬಿ ಟೈಪ್-ಸಿ
ಐಫೋನ್‌ನಲ್ಲಿ ಮೊದಲ ಬಾರಿಗೆ ಯುಎಸ್‌ಬಿ ಟೈಪ್-ಸಿ ಅನ್ನು ಪರಿಚಯಿಸುವ ಮೂಲಕ ಟೆಕ್ ಜಗತ್ತಿನಲ್ಲಿ ಮತ್ತೊಂದು ದೊಡ್ಡ ಬದಲಾವಣೆಯನ್ನು ತರಲಾಗಿದೆ. ಜೊತೆಗೆ ಮ್ಯಾಕ್‌ಬುಕ್, ಐಪ್ಯಾಡ್ ಮತ್ತು ಹೊಸ ಏರ್‌ಪಾಡ್ಸ್ ಪ್ರೊ ಅನ್ನು ಚಾರ್ಜ್ ಮಾಡಲು ಇದನ್ನು ಬಳಸಬಹುದು.
ಪ್ರೊಸೆಸರ್
ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಆಪಲ್ ಹೆಕ್ಸಾಕೋರ್ ಎ16 ಬಯೋನಿಕ್ ಪ್ರೊಸೆಸರ್‌ನ್ನು ಹೊಂದಿದ್ದು, ಐಫೋನ್ 15 ಪ್ರೋ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ ಹೆಕ್ಸಾಕೋರ್ ಎ17 ಪ್ರೊ ಪ್ರೊಸೆಸರ್‌ನ್ನು ಹೊಂದಿದೆ.
ಸ್ಟೋರೇಜ್
ಐಫೋನ್ 15, 6 ಜಿಬಿ ರ‍್ಯಾಮ್ ಮತ್ತು ಐಫೋನ್ 15 ಪ್ಲಸ್ 8 ಜಿಬಿ ರ‍್ಯಾಮ್-128, 256 ಜಿಬಿ ಆಂತರಿಕ ಮೆಮೊರಿಯಲ್ಲಿ ಲಭ್ಯವಿದೆ. ಐಫೋನ್ ೧೫ ಪ್ರೋ ಮತ್ತು ಐಫೋನ್ ೧೫ ಪ್ರೋ ಮ್ಯಾಕ್ಸ್ ೮ ಜಿಬಿ ರ‍್ಯಾಮ್-256 ಜಿಬಿ, 512 ಜಿಬಿ ಮತ್ತು 1ಟಿಬಿ ಆಂತರಿಕ ಮೆಮೊರಿಯಲ್ಲಿ ಲಭ್ಯವಿದೆ.
ಬೆಲೆ ಮತ್ತು ಲಭ್ಯತೆ
ಐಫೋನ್ 15 ಸೆಪ್ಟೆಂಬರ್ 15 ರಿಂದ ಪ್ರೀ ಆರ್ಡರ್ ಆರಂಭವಾಗಲಿದ್ದು, ಸೆಪ್ಟೆಂಬರ್ 22ರಂದು ಆಫ್‌ಲೈನ್ ಶಾಪ್‌ಗಳಲ್ಲಿ ಲಭ್ಯವಿರುತ್ತದೆ. ಐಫೋನ್ 15 79,000 ಐಫೋನ್ 15 ಪ್ಲಸ್ 89,000 ಐಫೋನ್ 15 ಪ್ರೋ 1,34,900 ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ 1,59,900 ರೂಪಾಯಿಯಿಂದ ಬೆಲೆ ಆರಂಭವಾಗಲಿದೆ.
ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಬ್ಲಾಕ್, ಬ್ಲೂ, ಗ್ರೀನ್, ಪಿಂಕ್ ಮತ್ತು ಯಲ್ಲೊ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಜೊತೆಗೆ ಪ್ರೋ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ ಗೆ ಬ್ಲಾಕ್ ಟೈಟೀನಿಯಂ, ಬ್ಲೂ ಟೈಟೀನಿಯಂ, ನಾಚುರಲ್ ಟೈಟೀನಿಯಂ, ವೈಟ್ ಟೈಟೀನಿಯಂ ಬಣ್ಣಗಳಲ್ಲಿ ಲಭ್ಯವಿದೆ.
Comments